Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 38929-10-2021
Hubballi
Press Release No. 389, (K) WEBINAR ORGANISED ON VIGILANCE AWARENESS.

              दक्षिण पश्चिम रेलवे / SOUTH WESTERN RAILWAY                प्रेस विज्ञप्ति / Press Release No. 389 Dt: 27.10.2021

ವಿಚಕ್ಷಣಾ ಜಾಗೃತಿಯನ್ನು ಮೂಡಿಸಲು ವೆಬಿನಾರ್ ಆಯೋಜನೆ

ಶ್ರೀ. ಪ್ರವೀಣ್ ಸಿನ್ಹಾ, ವಿಶೇಷ ನಿರ್ದೇಶಕ, ಸಿಬಿಐ ಅವರು ಇಂದು ವಿಚಕ್ಷಣಾ ಜಾಗೃತಿಯನ್ನು ಕುರಿತು ನೈಋತ್ಯ ರೈಲ್ವೆಯ ಅಧಿಕಾರಿಗಳನ್ನು ಉದ್ದೇಶಿಸಿ ವಿಡಿಯೋ ಸಮಾವೇಶದ ಮೂಲಕ ಮಾತನಾಡಿದರು. 

            ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆಯನ್ನು ಕುರಿತು ಮಾತನಾಡಿದ ಶ್ರೀ. ಸಿನ್ಹಾರವರು ವಿಚಕ್ಷಣಾ ಜಾಗೃತಿಯನ್ನು ಮೂಡಿಸುವ ಪ್ರಯತ್ನ ನಿಯಕಾಲಿಕವಾಗಿ ವರ್ಷವಿಡೀ ನಡೆಯಬೇಕು ಎಂದು ಒತ್ತಿ ಹೇಳಿದರು. ಭ್ರಷ್ಟಚಾರದ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಅತ್ಯಗತ್ಯ  ಹಾಗೂ ಈ ಸಂದೇಶವು ಅತಿ ಕೆಳಗಿನ ಮಟ್ಟಕ್ಕೂ ತಲುಪಬೇಕು ಎಂದರು. ಕೇಂದ್ರ ವಿಚಕ್ಷಣಾ ಆಯೋಗದ ಇತ್ತೀಚಿನ ಆದೇಶ ಹಾಗೂ ಅನುಸೂಚಿಗಳ ಅನುಸಾರ ನಿಯಮಗಳು ಹಾಗೂ ಕಾರ್ಯವಿಧಾನಗಳನ್ನು ಸಮಯಕ್ಕೆ ತಕ್ಕಂತೆ ನವೀಕರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

                ಭಾರತೀಯ ರೈಲ್ವೆ ಬೃಹತ್ ಸಾರ್ವಜನಿಕ ಸೇವೆಯ ಸಂಸ್ಥೆಯಾದಾಗ್ಯೂ ಹೆಚ್ಚಿನ ಮಟ್ಟದಲ್ಲಿ ತಂತ್ರಜ್ಞಾನವನ್ನು ತನ್ನಕಾರ್ಯವಿಧಾನಗಳಲ್ಲಿ ಅಳವಡಿಸಿಕೊಂಡಿರುವುದು ಆಡಳಿತ ಕಾರ್ಯಗಳಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಲ್ಲಿ ಪಾರದರ್ಶಕತೆಯನ್ನು ಸಾಧಿಸಲು ಅನುವು ಮಾಡಿಕೊಟ್ಟಿದೆ. ಈ ಕಾರಣದಿಂದಾಗಿ ವಿಚಕ್ಷಣಾ ಕೈಪಿಡಿ (ವಿಜಿಲೆನ್ಸ್ ಮ್ಯಾನ್ಯುವಲ್) ಯಲ್ಲಿ ಇ-ವಿಜಿಲೆನ್ಸ್ ಎನ್ನುವ ಒಂದು ಹೊಸ ಅಧ್ಯಾಯವನ್ನು ಸೇರಿಸಿಲಾಗಿದೆ ಎಂದು ಅವರು ತಿಳಿಸಿದರು.

         ಉಪ ಮುಖ್ಯ ವಿಜಿಲೆನ್ಸ್ ಅಧಿಕಾರಿ ಶ್ರೀ. ಅನ್ವೇಶ್ ಕುಮಾರ್ ರವರು ಮುಖ್ಯ ಅಥಿತಿಗಳಿಗೆ ಸ್ವಾಗತ ಕೋರಿದರು. ಈಸಂದರ್ಭದಲ್ಲಿ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ. ಸಂಜೀವ್ ಕಿಶೋರ್ ರವರು, ಈ ವೆಬಿನಾರ್ ಗಾಗಿ ತಮ್ಮ ಅಮೂಲ್ಯವಾದ ಸಮಯವನ್ನು ನೀಡಿದ್ದಕ್ಕಾಗಿ ಶ್ರೀ ಸಿನ್ಹಾ ರವರಿಗೆ ಕೃತಜ್ಞತೆಗಳನ್ನು ಅರ್ಪಿಸಿದರು. ಶ್ರೀ. ಮಿಲಿಂದ್ ಕೆ.ದೇವುಸ್ಕರ್, ವರಿಷ್ಠ ಉಪ ಪ್ರಧಾನ ವ್ಯವಸ್ಥಾಪಕರು ಹಾಗೂ ಮುಖ್ಯ ವಿಜಿಲೆನ್ಸ್ ಅಧಿಕಾರಿ ಹಾಗೂ ಎಲ್ಲ ಪ್ರಮುಖ ವಿಭಾಗೀಯ ಮುಖ್ಯಸ್ಥರೂ ಈ ವೆಬಿನಾರ್ ನಲ್ಲಿ ಭಾಗವಹಿಸಿದರು.  ಶ್ರೀ. ಅನ್ವೇಶ್ ಕುಮಾರ್ ರವರಿಂದ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

                                                                                                                                       ಅನೀಶಹೆಗಡೆ

                                                                                                                  ಮುಖ್ಯಸಾರ್ವಜನಿಕಸಂಪರ್ಕಅಧಿಕಾರಿ

                                                                                                                           ನೈಋತ್ಯರೈಲ್ವೆ, ಹುಬ್ಬಳ್ಳಿ





  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.