Screen Reader Access Skip to Main Content Font Size   Increase Font size Normal Font Decrease Font size
Indian Railway main logo
Search :
View Content in Hindi
National Emblem of India

About Us

News & Recruitment

Tenders

Construction Projects

Commercial ,Freight Information & Public Information

For IR Personnel

Contact Us

 
Bookmark Mail this page Print this page
QUICK LINKS
Press Release No. 44403-12-2021
Hubballi
Press Release No. 444, (K) SHRI SANJEEV KISHORE, GENERAL MANAGER SWR CHAIRED A REVIEW MEETING ON PLANNING & CONSTRUCTION OF ROB, RUB OF SWR

              दक्षिण पश्चिम रेलवे / SOUTH WESTERN RAILWAY                प्रेस विज्ञप्ति / Press Release No. 444 Dt: 03.12.2021

ಶ್ರೀ ಸಂಜೀವ ಕಿಶೋರ್ ಪ್ರಧಾನ ವ್ಯವಸ್ಥಾಪಕರು ನೈರುತ್ಯ ರೈಲ್ವೆ ಇವರ ಅಧ್ಯಕ್ಷತೆಯಲ್ಲಿ ರಸ್ತೆ ಮೇಲ್ಸೇತುವೆಮತ್ತು ರಸ್ತೆ ಕೆಳಸೇತುವೆ ಯೋಜನೆ ಮತ್ತು ನಿರ್ಮಾಣದ ಪ್ರಗತಿ /ಪರಿಶೀಲನಾ ಸಭೆ ನಡೆಸಲಾಯಿತು

ನೈಋತ್ಯ ರೈಲ್ವೆಯ ಕೇಂದ್ರ ಕಚೇರಿಯಲ್ಲಿ ಪ್ರಧಾನ ವ್ಯವಸ್ಥಾಪಕರಾದ ಶ್ರೀಸಂಜೀವ್ ಕಿಶೋರ್ ಇಂದು ರಸ್ತೆ ಮೇಲ್ಸೇತುವೆ ಮತ್ತು ರಸ್ತೆ ಕೆಳ ಸೇತುವೆಗಳ ನಿರ್ಮಾಣ ಕುರಿತಾದ ಯೋಜನೆ ಹಾಗೂ ಅವುಗಳ ನಿರ್ಮಾಣ ಕಾರ್ಯದ ಪ್ರಗತಿಗೆ ಸಂಬಂಧಿಸಿದಂತೆ ಪರಿಶೀಲನಾ ಸಭೆ ನಡೆಸಿದರು.

ವಲಯದ ಮೂರು ವಿಭಾಗಗಳ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಾಗೂ ಕನ್ಸ್ಟ್ರ ಕ್ಷನ್ ಸಂಸ್ಥೆಯ ಮುಖ್ಯ ಇಂಜಿನಿಯರ್ ರವರುಗಳು ವಿಡಿಯೋ ಸಮಾವೇಶದ ಮೂಲಕ ಸಭೆಯಲ್ಲಿ ಭಾಗವಹಿಸಿದರು. ಅಸ್ತಿತ್ವದಲ್ಲಿರುವ ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳಲ್ಲಿ ನೀರಿನ ಚರಂಡಿ ವ್ಯವಸ್ಥೆಯ ಸ್ಥಿತಿಯನ್ನು ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಲೆವೆಲ್ ಕ್ರಾಸಿಂಗ್ ಗೇಟ್ ಗಳ ಬದಲಾಗಿ ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳ ನಿರ್ಮಾಣದ ಯೋಜನೆಯನ್ನು ಕುರಿತಾಗಿಯೂ ಅವರು ವಿಶ್ಲೇಷಣೆ ನಡೆಸಿದರು.

ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳ ಸೇತುವೆಗಳು ನೀರಿನಿಂದ ಆವೃತವಾಗುತ್ತಿರುವ ಸಮಸ್ಯೆಯನ್ನು ಬಗೆ ಹರಿಸುವಲ್ಲಿ  ವಾಸ್ತವಿಕವಾದ ಮತ್ತು ಮಿತವ್ಯಯದ ಶಾಶ್ವತ ಪರಿಹಾರವನ್ನು ಸಮಯೋಚಿತವಾಗಿ ಕಾರ್ಯಗತಗೊಳಿಸುವಂತೆ ಸಂಬಂಧಿತ ಇಂಜಿನಿಯರ್ ಗಳಿಗೆ ಆದೇಶ ನೀಡಿದರು.

ಹೊಸ ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳಸೇತುವೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯವಾದ ಭೂಸ್ವಾಧೀನವನ್ನು ಕುರಿತಾಗಿ ರಾಜ್ಯ ಸರ್ಕಾರದ ಅಧಿಕಾರಿಗಳ  ಸಮನ್ವಯದೊಂದಿಗೆ ಕಾರ್ಯನಿರ್ವಹಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಆದೇಶ ನೀಡಿದರು.

ಸಾರ್ವಜನಿಕರ ಸುರಕ್ಷತೆಗಾಗಿ ರಸ್ತೆ ಮೇಲ್ಸೇತುವೆ ಹಾಗೂ ರಸ್ತೆ ಕೆಳಸೇತುವೆಗಳ ನಿರ್ಮಾಣದ ಮೂಲಕ ಲೆವೆಲ್ ಕ್ರಾಸಿಂಗ್ ಗೇಟುಗಳನ್ನು ಹಂತಹಂತವಾಗಿ ತೆಗೆದು ಹಾಕುವುದು ರೈಲ್ವೆ ಮಂಡಳಿಯ ನೀತಿಯಾಗಿದೆ.

ಈ ಕಾಮಗಾರಿಗಳು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳಬೇಕು ಎಂದು ಶ್ರೀ ಸಂಜೀವ್ ಕಿಶೋರ್ ರವರು ಹೇಳಿದರು.

                                                                                   ಅನೀಶ ಹೆಗಡೆ
                                                               ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ
                                                                          ನೈಋತ್ಯ ರೈಲ್ವೆ, ಹುಬ್ಬಳ್ಳಿ.  






  SWR Personnel-Web Mail | Admin Login | Site Map | Contact Us | RTI | Disclaimer | Terms & Conditions | Privacy Policy Valid CSS! Valid XHTML 1.0 Strict

© 2016  All Rights Reserved.

This is the Portal of Indian Railways, developed with an objective to enable a single window access to information and services being provided by the various Indian Railways entities. The content in this Portal is the result of a collaborative effort of various Indian Railways Entities and Departments Maintained by CRIS, Ministry of Railways, Government of India.