SOUTH WESTERN RAILWAY WOMEN’S WELFARE ORGANIZATION (SWRWWO) CONDUCTS ANNUAL AWARD FUNCTION AND LABOUR DAY
South Western Railway Women’s Welfare Organization (SWRWWO) conducted Annual Award Function and Labour Day today on 05.05.2022 at Railway Officers’ Club, Hubballi. Shri Sanjeev Kishore, General Manager of South Western Railway was the Chief Guest. Shri Arvind Malkhede, Divisional Railway Manager, Hubballi was the Guest of Honour.
Every year, SWRWWO awards Scholarship to the meritorious children of non-gazetted Railway employees. This year scholarships totalling to Rs.1,27,000 and certificates were awarded to total 36 wards of railway employees who have scored 90% & above in SSLC or 10th and 85 % aggregate or SGPA of 8.5 & above in PUC-II or 12th Standard during the Academic Year 2020-21.
Congratulating the winners, Shri Sanjeev Kishore said that the awards recognize their talent and motivate & encourage them to excel further.
As part of May Day celebration, 32 Senior employees in the category of Gang men, track maintainers, OHE Khalasi and Signal Maintenace who work under difficult conditions and employees who worked in Railway Central Hospital in COVID wards and the Cleaning staff and Health Inspectors were also felicitated on the occasion.
Additional General Manager, Shri P.K. Mishra; President of SWRWWO/HQ, Dr. Vandana Srivastava; President of SWRWWO/Hubballi Division, Smt. Meenal Gandhe; Members of SWRWWO; Senior Officers of South Western Railway and others were present.
ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯಿಂದ ವಾರ್ಷಿಕ
ಪ್ರಶಸ್ತಿ ಸಮಾರಂಭ ಮತ್ತು ಕಾರ್ಮಿಕ ದಿನಾಚರಣೆ
ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ವತಿಯಿಂದ ಇಂದು ಹುಬ್ಬಳ್ಳಿಯ ರೈಲ್ವೆ ಅಧಿಕಾರಿಗಳ ಕ್ಲಬ್ನಲ್ಲಿ ವಾರ್ಷಿಕ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ಮತ್ತು ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಸಂಜೀವ್ ಕಿಶೋರ್ ರವರು ಮುಖ್ಯ ಅತಿಥಿಗಳಾಗಿದ್ದರು. ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ಅರವಿಂದ ಮಾಲಖೇಡೆಯವರು ಗೌರವ ಅತಿಥಿಗಳಾಗಿದ್ದರು.
ಪ್ರತಿ ವರ್ಷ ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯು ನಾನ್-ಗೆಜೆಟೆಡ್ ರೈಲ್ವೆ ಉದ್ಯೋಗಿಗಳ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತದೆ. ಈ ವರ್ಷ 10ನೇ ತರಗತಿಯಲ್ಲಿ 90% ಮತ್ತು ಹೆಚ್ಚಿನ ಅಂಕ ಗಳಿಸಿದ ಹಾಗೂ ದ್ವಿತೀಯ ಪಿ.ಯು.ಸಿ./12ನೇ ತರಗತಿಯಲ್ಲಿ 85% ಮತ್ತು ಅದಕ್ಕೂ ಹೆಚ್ಚು ಅಂಕ ಗಳಿಸಿದ 36 ವಿದ್ಯಾರ್ಥಿಗಳಿಗೆ ಒಟ್ಟು 1,27,000 ರೂಪಾಯಿಗಳ ನಗದು ಬಹುಮಾನ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಯಿತು
ವಿಜೇತರನ್ನು ಅಭಿನಂದಿಸಿದ ಶ್ರೀ ಸಂಜೀವ್ ಕಿಶೋರ್ ರವರು ಈ ಪ್ರಶಸ್ತಿಗಳು ಅವರಿಗೆ ಮತ್ತಷ್ಟು ಸಾಧನೆಯನ್ನು ಮಾಡಲು ಪ್ರೇರೇಪಿಸುತ್ತದೆ ಎಂದರು.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಿರಿಯ ಗ್ಯಾಂಗ್ಮೆನ್, ಟ್ರ್ಯಾಕ್ ಮೆನ್, ಸಿಗ್ನಲ್ ನಿರ್ವಹಣಾ ಸಿಬ್ಬಂದಿಗಳು ಮತ್ತು ರೈಲ್ವೆ ಆಸ್ಪತ್ರೆಯಲ್ಲಿ ಕೋವಿಡ್ ವಾರ್ಡ್ಗಳಲ್ಲಿ ಕಾರ್ಯ ನಿರ್ವಹಿಸಿದ ಆರೋಗ್ಯ ಸಿಬ್ಬಂದಿಗಳು ಮತ್ತು ಸ್ವಚ್ಛತಾ ಸಿಬ್ಬಂದಿಗಳು ಸೇರಿದಂತೆ ಒಟ್ಟು 32 ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಅಪರ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪಿ.ಕೆ. ಮಿಶ್ರಾ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆ/ಪ್ರಧಾನ ಕಾರ್ಯಾಲಯದ ಅಧ್ಯಕ್ಷೆ ಡಾ. ವಂದನಾ ಶ್ರೀವಾಸ್ತವ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಹುಬ್ಬಳ್ಳಿ ವಿಭಾಗದ ಅಧ್ಯಕ್ಷೆ ಶ್ರೀಮತಿ ಮೀನಲ್ ಗಾಂಧೆ, ನೈರುತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಘಟನೆಯ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.