दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 340 Dt: 07.02.2023
CHANGE IN THE PATTERN OF TRAIN SERVICES
A)As notified by South Central Railway, the following trains will be partially cancelled due to engineering works related to Through Rail Renewal (TRR) between New Guntur and Namburu stations:-
1.Train No. 17329 SSS Hubballi - Vijayawada Daily Express leaving from SSS Hubballi from February 7 to 9, 2023 will be partially cancelled between Guntur & Vijayawada stations and it will be short terminated at Guntur instead of Vijayawada.
2.Train No. 17330 Vijayawada – SSS Hubballi Daily Express leaving from Vijayawada from February 8 to 10, 2023 will be partially cancelled between Vijayawada - Guntur and it will be originated from Guntur instead Vijayawada.
B)The following trains will be partially cancelled as notified by Southern Railway due to engineering work related to track doubling between Thiruvananthapuram Central and Kanniyakumari:-
1.Train No. 16526 KSR Bengaluru – Kanniyakumari Daily Express leaving from KSR Bengaluru on February 13, 14 & 16, 2023 will be partially cancelled between Thiruvananthapuram Central - Kanniyakumari and it will be short terminated at Thiruvananthapuram Central instead of Kanniyakumari.
2.Train No. 16525 Kanniyakumari - KSR Bengaluru Daily Express leaving from Kanniyakumari on February 14, 15 & 17, 2023 will be partially cancelled between Kanniyakumari - Thiruvananthapuram Central stations and it will be originated from Thiruvananthapuram Central instead of Kanniyakumari.
ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ
A)ನ್ಯೂ ಗುಂಟೂರು ಮತ್ತು ನಂಬೂರು ನಿಲ್ದಾಣಗಳ ನಡುವೆ ರೈಲು ಹಳಿ ನವೀಕರಣ (ಟಿಆರ್‌ಆರ್) ಗೆ ಸಂಬಂಧಿಸಿದ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತದೆ ಎಂದು ದಕ್ಷಿಣ ಮಧ್ಯ ರೈಲ್ವೆ ವಲಯ ಸೂಚಿಸಿದೆ.
1.ಇದೇ ಫೆಬ್ರವರಿ 7 ರಿಂದ 9 ರವರೆಗೆ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17329 ಎಸ್.ಎಸ್.ಎಸ್ ಹುಬ್ಬಳ್ಳಿ - ವಿಜಯವಾಡ ಡೈಲಿ ಎಕ್ಸ್‌ಪ್ರೆಸ್ ರೈಲು ಗುಂಟೂರು ಮತ್ತು ವಿಜಯವಾಡ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ವಿಜಯವಾಡ ನಿಲ್ದಾಣದ ಬದಲು ಗುಂಟೂರು ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
2.ಇದೇ ಫೆಬ್ರವರಿ 8 ರಿಂದ 10 ರವರೆಗೆ ವಿಜಯವಾಡ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 17330 ವಿಜಯವಾಡ – ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು ವಿಜಯವಾಡ ಮತ್ತು ಗುಂಟೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ವಿಜಯವಾಡ ನಿಲ್ದಾಣದ ಬದಲಿಗೆ ಗುಂಟೂರು ನಿಲ್ದಾಣದಿಂದ ಪ್ರಾರಂಭವಾಗುತ್ತದೆ.
B)ತಿರುವನಂತಪುರಂ ಸೆಂಟ್ರಲ್ ಮತ್ತು ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಇಂಜಿನಿಯರಿಂಗ್‌ಗೆ ಸಂಬಂಧಿಸಿದ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗುತ್ತಿದೆ ಎಂದು ದಕ್ಷಿಣ ರೈಲ್ವೆ ವಲಯ ಸೂಚಿಸಿದೆ.
1.ಇದೇ ಫೆಬ್ರವರಿ 13, 14 ಮತ್ತು 16 ರಂದು ಕೆ.ಎಸ್.ಆರ್ ಬೆಂಗಳೂರು ರೈಲ್ವೆ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16526 ಕೆ.ಎಸ್.ಆರ್ ಬೆಂಗಳೂರು – ಕನ್ಯಾಕುಮಾರಿ ಡೈಲಿ ಎಕ್ಸ್‌ಪ್ರೆಸ್ ರೈಲು ತಿರುವನಂತಪುರಂ ಸೆಂಟ್ರಲ್ – ಕನ್ಯಾಕುಮಾರಿ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಕನ್ಯಾಕುಮಾರಿ ನಿಲ್ದಾಣದ ಬದಲು ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಲ್ಲಿ ತನ್ನ ಪ್ರಯಾಣ ಕೊನೆಗೊಳಿಸಲಿದೆ.
2.ಇದೇ ಫೆಬ್ರವರಿ 14, 15 ಮತ್ತು17 ರಂದು ಕನ್ಯಾಕುಮಾರಿ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 16525 ಕನ್ಯಾಕುಮಾರಿ – ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲು ಕನ್ಯಾಕುಮಾರಿ - ತಿರುವನಂತಪುರಂ ಸೆಂಟ್ರಲ್ ರೈಲ್ವೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ. ಈ ರೈಲು ಕನ್ಯಾಕುಮಾರಿ ನಿಲ್ದಾಣದ ಬದಲಿಗೆ ತಿರುವನಂತಪುರಂ ಸೆಂಟ್ರಲ್ ನಿಲ್ದಾಣದಿಂದ ಪ್ರಾರಂಭವಾಗುತ್ತದೆ.
Aneesh Hegde
Chief Public Relations Officer South Western Railway, Hubballi