दक्षिण पश्चिम रेलवे / SOUTH WESTERN RAILWAY
प्रेस विज्ञप्ति / Press Release No. 382 Dt: 09.03.2023
Shri A. M. Chowdhary assumes charge as Railway Safety Commissioner
Shri Anant Madhukar Chowdhary, IRSEE (Indian Railway Service of Electrical Engineers), took charge as the Commissioner of Railway Safety, Southern Circle, Bengaluru on March 1, 2023, on the retirement of Shri Abhai Kumar Rai. He is an IRSEE officer of 1987 batch.
He carries vast experience of over three decades, starting his career on the Southern Railway and serving in various fields in the Indian Railways, including electrification, electric locomotives, and also general administration. He brings with him a wealth of experience and expertise in the field of railway safety.
Just prior to taking charge of the post of Commissioner of Railway Safety, Southern Circle, Shri Chowdhary was working as Commissioner of Railway Safety, South Eastern Circle.
His jurisdiction covers the South Western Railway, the Southern Railway, Bengaluru Metro Rail Corporation Limited, Chennai Metro Rail Limited, and Kochi Metro Rail Limited.
ಶ್ರೀ ಎ.ಎಂ.ಚೌಧರಿ ರೈಲ್ವೆ ಸುರಕ್ಷತಾ ಆಯುಕ್ತರಾಗಿ ಅಧಿಕಾರ ಸ್ವೀಕಾರ
ಶ್ರೀ ಅನಂತ ಮಧುಕರ ಚೌಧರಿ, ಐಆರ್‌ಎಸ್‌ಇಇ (ಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್)ಶ್ರೀ ಅಭಯ್ ಕುಮಾರ್ ರೈ ಅವರ ನಿವೃತ್ತಿಯ ನಂತರ ಮಾರ್ಚ್ 1, 2023 ರಂದು ಬೆಂಗಳೂರಿನ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಇವರು 1987ರ ಬ್ಯಾಚ್‌ನಇಂಡಿಯನ್ ರೈಲ್ವೆ ಸರ್ವಿಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರ್ಸ್ ಅಧಿಕಾರಿಆಗಿದ್ದಾರೆ.
ದಕ್ಷಿಣ ರೈಲ್ವೆಯಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿ, ಭಾರತೀಯ ರೈಲ್ವೆ ವಿದ್ಯುದ್ದೀಕರಣ, ಎಲೆಕ್ಟ್ರಿಕ್ ಲೋಕೋಮೋಟಿವ್ಸ್ ಹಾಗೂ ಸಾಮಾನ್ಯ ಆಡಳಿತ ವಿಭಾಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಮೂರು ದಶಕಗಳಕಾಲ ಅಪಾರ ಅನುಭವವನ್ನು ಹೊಂದಿದ್ದಾರೆ. ಹಲವು ರೈಲ್ವೆ ಸುರಕ್ಷತಾ ಕ್ಷೇತ್ರದಲ್ಲಿ ಅನುಭವ ಮತ್ತು ಪರಿಣತಿ ಗಳಿಸಿದ್ದಾರೆ.
ಬೆಂಗಳೂರು ದಕ್ಷಿಣ ವೃತ್ತ ರೈಲ್ವೆ ಸುರಕ್ಷತಾ ಆಯುಕ್ತರ ಹುದ್ದೆ ವಹಿಸಿಕೊಳ್ಳುವ ಮೊದಲು, ಶ್ರೀ ಚೌಧರಿ ಅವರು ಆಗ್ನೇಯ ವೃತ್ತದ ರೈಲ್ವೆ ಸುರಕ್ಷತೆಯ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನೈರುತ್ಯ ರೈಲ್ವೆ, ದಕ್ಷಿಣ ರೈಲ್ವೆ, ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್, ಚೆನ್ನೈ ಮೆಟ್ರೋ ರೈಲು ಲಿಮಿಟೆಡ್, ಮತ್ತು ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ ಇವರ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ.
Aneesh Hegde
Chief Public Relations Officer South Western Railway, Hubballi